SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಪದವಿ ಪೂರ್ವ ವಿದ್ಯಾಲಯದಲ್ಲಿ ನೂತನ ಶೌಚಾಲಯದ ಉದ್ಘಾಟನಾ ಸಮಾರಂಭ

01ಕೇವಲ ಭೌತಿಕ ಶಿಕ್ಷಣಕ್ಕೆ ಒತ್ತು ನೀಡಿ, ಬದುಕಿಗೆ ನೇರವಾಗಿ ನೆರವಾಗುವ ಶಿಸ್ತು ಹಾಗೂ ದೈವಭಕ್ತಿಯನ್ನು ಕಡೆಗಣಿಸಿದುದರ ಪರಿಣಾಮವಾಗಿ ಸಮಾಜ ಅವನತಿಯ ಕಡೆಗೆ ಸಾಗುತ್ತಿದೆ. ಅಳಿಕೆಯ ವಿದ್ಯಾಸಂಸ್ಥೆಯಲ್ಲಿ ಆಧುನಿಕ ಹಾಗೂ ಪ್ರಾಚೀನ ಮೌಲ್ಯಗಳನ್ನು ಸಮನ್ವಯಗೊಳಿಸಿರುವುದನ್ನು ಮೆಚ್ಚಿ ಮಾತನಾಡಿದ ಬೋಬ್‌ರಾಜ್ ಜೆಹರಾನ್ ಜನರಲ್ ಮ್ಯಾನೇಜರ್, ಕೆಐಒಸಿಎಲ್, ಮಂಗಳೂರು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆಯ ವಿದ್ಯಾಸಂಸ್ಥೆಯ ಪದವಿ ಪೂರ್ವ ವಿದ್ಯಾಲಯದಲ್ಲಿ ನೂತನವಾಗಿ ರೂ.16 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯವನ್ನು ಉದ್ಘಾಟಿಸಿದರು. ಕೇಂದ್ರ ಸರಕಾರದ ಸ್ವಚ್ಛ ವಿದ್ಯಾಲಯ ಅಭಿಯಾನದ ಸಿಎಸ್‌ಆರ್ ಯೋಜನೆಯಂತೆ ಕೆಐಒಸಿಎಲ್ ಲಿಮಿಟೆಡ್, ಪಣಂಬೂರು, ಮಂಗಳೂರು ಇವರು ರೂ. 16 ಲಕ್ಷ ಧನಸಹಾಯವನ್ನು ಮಾಡಿರುತ್ತಾರೆ. ಇದೇ ಸಂಸ್ಥೆಯ ಜಂಟಿ ವ್ಯವಸ್ಥಾಪಕರಾದ ಗೋವಿಂದರಾಜ್ ಭಟ್ ಮಾತನಾಡಿ ಶಿಸ್ತಿನ ಬದುಕೇ ಸರ್ವ ಯಶಸ್ಸಿನ ಮೂಲ ನೆಲೆಗಟ್ಟು ಎಂದರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಮಾತನಾಡಿ ಪ್ರಕೃತಿಯ ರಕ್ಷಣೆಗೆ ಹಾಗೂ ಅದರ ಬಳಕೆಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದರು.

ದೇಶಾಭಿಮಾನ, ಸ್ವಾಭಿಮಾನವನ್ನು ಕಳೆದುಕೊಂಡಾಗ ಅಭಿಯಾನಗಳನ್ನು ಕೈಗೊಂಡು ಜನಜಾಗೃತಿ ಮಾಡಬೇಕಾಗುತ್ತದೆ ಎಂದು ಪ್ರಾಸ್ತಾವಿಕ ಮಾತುಗಳನ್ನು ಶ್ರೀ ಮಹೇಂದ್ರ ಹೆಗಡೆ ವ್ಯವಸ್ಥಾಪಕರು ನುಡಿದರು. ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರದ ಆಂಗ್ಲ ಭಾಷಾ ಅಧ್ಯಾಪಕ ರಾಧಾಕೃಷ್ಣ ಹೊಳ್ಳ ಇವರು ಕಾರ್ಯಕ್ರಮ ನಿರ್ವಹಿಸಿದರು.