ಶಿಕ್ಷಕ-ರಕ್ಷಕ ಸಮಾವೇಶ
ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ, ಅಳಿಕೆಯ ಶಿಕ್ಷಕ-ರಕ್ಷಕ ಸಭೆಯು ದಿನಾಂಕ 29.06.2019ರಂದು ನಡೆಯಿತು. ಶಾಲಾ ಸಂಚಾಲಕರಾದ ಕೆ.ಯಸ್. ಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಸಮಾವೇಶಕ್ಕೆ ಚಾಲನೆ ನೀಡಿದರು. ಕನ್ನಡ ಮಾಧ್ಯಮ ಶಾಲೆಗೆ ಹೆತ್ತವರು ತಮ್ಮ ಮಕ್ಕಳನ್ನು ಕಳುಹಿಸಿದ ಬಗ್ಗೆ ಸಭಾಧ್ಯಕ್ಷರು, ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಸಂತಸ ವ್ಯಕ್ತಪಡಿಸಿ ಮಾತನಾಡಿದರು. ಮಕ್ಕಳ ಕಲಿಕೆಯಲ್ಲಿ ಹೆತ್ತವರ ಒಡನಾಟ ಉತ್ತಮವಾಗಿದ್ದಾಗ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ ಎಂದು ಸಂಸ್ಥೆಯ ಕಾರ್ಯದರ್ಶಿ ಯಸ್. ಚಂದ್ರಶೇಖರ ಭಟ್ ತಿಳಿಸಿದರು. ಶಾಲಾ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕರಾದ ಈಶ್ವರ ನಾಯ್ಕ್ ಯಸ್. ಮಾಹಿತಿ ನೀಡಿದರು. ಹೆತ್ತವರು ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ ಎಂದು ಅಳಿಕೆ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಯಸ್. ಪದ್ಮನಾಭ ಪೂಜಾರಿ ನುಡಿದರು. ಇಲಾಖಾ ಸೌಲಭ್ಯಗಳ ಬಗ್ಗೆ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಚಂದ್ರಶೇಖರ ನಾಯ್ಕ್ ತಿಳಿಸಿದರು. ಪೋಷಕರಾದ ಕುಶಾಲಪ್ಪ ಮುಳಿಯ, ಚೆನ್ನಪ್ಪ ಕಲ್ಲೆಂಚಿಪಾದೆ, ಉಷಾ ಪಿಲಿಂಗುಳಿ ಅನಿಸಿಕೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಶಾಲಾ ಶೈಕ್ಷಣಿಕ ಸಮಿತಿಯ ಅಧ್ಯಕ್ಷರಾದ ಜನಾರ್ದನ ನಾಯಕ್ ಯಸ್., ನಿವೃತ್ತ ಮುಖ್ಯ ಶಿಕ್ಷಕರಾದ ಯಂ. ರುಕ್ಮಯ ಗೌಡ ಉಪಸ್ಥಿತರಿದ್ದರು. ಅನುಲಾ ರೈ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಂದ್ರ ರೈ ಸ್ವಾಗತಿಸಿ, ಶಿಕ್ಷಕರಾದ ಪ್ರವೀಣ್ ಶೆಟ್ಟಿ ವಂದಿಸಿ, ಶಿಕ್ಷಕರಾದ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.