SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಅನಾಥಾಲಯ ಬಾಪೂಜಿ ಬಾಲನಿಕೇತನದಲ್ಲಿ ಕೆಲವು ಸೀಟುಗಳು ಖಾಲಿ ಇವೆ.

ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ಇದರ ಆಶ್ರಯದಲ್ಲಿ ನಡೆಸುತ್ತಿರುವ ಅನಾಥಾಲಯ ಬಾಪೂಜಿ ಬಾಲನಿಕೇತನದಲ್ಲಿ ಕೆಲವು ಸೀಟುಗಳು ಖಾಲಿ ಇವೆ. ದಾಖಲಾತಿಯು 4, 5, 6, 7ನೇ ತರಗತಿಯ ಕನ್ನಡ ಮಾಧ್ಯಮದವರಿಗೆ ಮಾತ್ರ. ತಂದೆ ಅಥವಾ ತಾಯಿ ಇಲ್ಲದ ಅನಾಥರಾಗಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.11,೦೦೦ಕ್ಕಿಂತ ಕಡಿಮೆ ಇರಬೇಕು. ಇಂತಹ ಬಾಲಕರಿಗೆ ಉಚಿತ ಊಟ, ವಸತಿಯೊಂದಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ತಂದೆ ಅಥವಾ ತಾಯಿ ನಿಧನ ಹೊಂದಿದ ಬಗ್ಗೆ ಮರಣ ಪ್ರಮಾಣ ಪತ್ರ, ಬಾಲಕನ ಜನನ ದಿನಾಂಕ ಇರುವ ಯಾವುದಾದರೊಂದು ಶಾಲಾ ದಾಖಲೆ ಮತ್ತು ಆದಾಯ ಪ್ರಮಾಣ ಪತ್ರವನ್ನು ತರಬೇಕಾಗುತ್ತದೆ. ಅರ್ಹ ಬಾಲಕರನ್ನು ದಿನಾಂಕ 30-04-2015ರಂದು ಪೂರ್ವಾಹ್ನ 9-೦೦ ಗಂಟೆಗೆ ಈ ಕೆಳಗೆ ತಿಳಿಸಿರುವ ವಿಳಾಸಕ್ಕೆ ಸಂದರ್ಶನಕ್ಕೆ ಕರೆದುಕೊಂಡು ಬರಬಹುದು.

ಅಧ್ಯಕ್ಷರು, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ

ಅಂಚೆ : ಸತ್ಯಸಾಯಿ ವಿಹಾರ, ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ

ಮೊಬೈಲ್ : 9449663797,     9481758414