SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ವನಮಹೋತ್ಸವ, ಜಲಮರುಪೂರಣ,ಆಟಿಡೊಂಜಿದಿನ & ಶಾಲಾ ವಾರ್ಷಿಕ ಶ್ರಮಸೇವೆ – ಸಂಯುಕ್ತ ಕಾರ್ಯಕ್ರಮ

DSC_0752ದಿನಾಂಕ ೦೫.೦೮.೨೦೧೬ನೇ ಶುಕ್ರವಾರ ವನಮಹೋತ್ಸವ, ಜಲಮರುಪೂರಣ, ಆಟಿಡೊಂಜಿದಿನ ಮತ್ತು ಶಾಲಾ ವಾರ್ಷಿಕ ಶ್ರಮಸೇವೆ – ಎನ್ನುವ ಸಂಯುಕ್ತ ಕಾರ್ಯಕ್ರಮವು ಶ್ರೀಮತಿ ಶುಕುಂತಲಾ ಶೆಟ್ಟಿ, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ ಮತ್ತು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಪ್ರಬಂಧಕರಾದ ಶ್ರೀ ಮಹೇಂದ್ರ ಎಸ್.ಹೆಗ್ಡೆ ಇವರು ದೀಪೋಜ್ವಲನ ಮಾಡುವ ಮೂಲಕ ಚಾಲನೆಗೊಂಡಿತು. ಅತಿಥಿಗಳಾಗಿ ಶ್ರೀ ಜಾನ್ ಡಿಸೋಜ-ವಿಟ್ಲ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪದ್ಮನಾಭ ಪೂಜಾರಿ ಇವರು ಸಕಾಲಿಕ ಮಾತುಗಳನ್ನಾಡಿದರು. ಮುಖ್ಯೋಪಾಧ್ಯಾಯರಾದ ಶ್ರೀ ರಘು ಸ್ವಾಗತಿಸಿ, ಶಿಕ್ಷಕ ವಿ.ನಾರಾಯಣ ನಾಯ್ಕ ವಂದಿಸಿದರು. ಇನ್ನೋರ್ವ ಶಿಕ್ಷಕ ನೇರೋಳ್ ನಾರಾಯಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು.