ಶ್ರೀ ವಿದ್ಯಾಗಣಪತಿ ಮಹೋತ್ಸವ
ದಿನಾಂಕ : 14-9-2018 ಶುಕ್ರವಾರ
ಸಮಯ : ಪೂರ್ವಾಹ್ನ 10:00ರಿಂದ
ಗಣಪತಿ ಪ್ರಪಂಚದ ಮೊದಲನೆಯ ಬರಹಗಾರ. ಗಣೇಶನ ವಿಗ್ರಹ ಅಕ್ಷರ ರೂಪವಾಗಿರುವುದು. ಇಡೀ ಮಹಾಭಾರತವನ್ನು ಅರ್ಥೈಸಿಕೊಂಡು ರಚಿಸಿದ್ದು ಗಣಪತಿ. ವಿದ್ಯಾರ್ಥಿಗಳ ಕಲಿಕೆಗೆ ಗಣೇಶ ಆದರ್ಶ. ವಿದ್ಯಾರ್ಥಿಗಳ ಬರವಣಿಗೆ ತನಗೆ ಹಾಗೂ ಇತರರಿಗೂ ಅರ್ಥವಾಗುವಂತಿರಬೇಕು. ಹಾಗಾದಾಗ ಮಾತ್ರ ಕಲಿಕೆ ಅರ್ಥಪೂರ್ಣವಾಗುವುದು. ಗಣ ಎಂದರೆ ಸಮೂಹ. ನಮ್ಮ ಇಂದ್ರಿಯ ಸಮೂಹಗಳನ್ನು ನಿಯಂತ್ರಿಸಲು ಮೂರ್ತ ರೂಪ ಅಗತ್ಯ. ಹಾಗಾಗಿ ಮೂರ್ತಿ ರೂಪದಲ್ಲಿ ಗಣೇಶನ ಆರಾಧನೆ ನಮ್ಮ ಉನ್ನತಿಗೆ ಸಹಕಾರಿ ಎಂದು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಜರಗಿದ ಶ್ರೀ ವಿದ್ಯಾಗಣಪತಿ ಮಹೋತ್ಸವದ ಎರಡನೇ ದಿನದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಧಾರ್ಮಿಕ ಉಪನ್ಯಾಸಕರಾದ ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ತಿಳಿಸಿದರು. ಪ್ರೌಢಶಾಲಾ ಅಧ್ಯಾಪಕರಾದ ಅಶೋಕ ಕುಮಾರ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಈಶ್ವರ ನಾಯ್ಕ ವಂದಿಸಿದರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್., ಸಂಚಾಲಕರಾದ ಕೆ.ಯಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಶ್ಲೇಷ ಡಿ.ಯಂ., ನೇತ್ರ ಡಿ., ಪವನ್ ಎ. ಭಾಷಣ ಮಾಡಿದರು. ವರ್ಷಾ ಟಿ., ನೇತ್ರ ಮತ್ತು ತಂಡದವರು ಹಾಡಿದರು. ಪ್ರೌಢಶಾಲಾ ಅಧ್ಯಾಪಕರಾದ ಪ್ರಶಾಂತ್ ಜೆ. ನಿರೂಪಿಸಿದರು.