SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಮಡಿಯಾಲ ನಾರಾಯಣ ಭಟ್ ಸ್ಮಾರಕದ ಲೋಕಾರ್ಪಣೆ, ಉದ್ಘಾಟನೆ ಮತ್ತು ಭೂಮಿ ಪೂಜೆ

Girls College Bhoomi Poojaದಿನಾಂಕ : 30-11-2015 ಸೋಮವಾರ
ಅಳಿಕೆಯ ಮಹಾಚೇತನ, ಅಳಿಕೆಗೆ ಪ್ರಸಿದ್ಧಿಯನ್ನು ತಂದುಕೊಟ್ಟ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಸ್ಥಾಪಕರಾಗಿ ಲೋಕ ಪ್ರಸಿದ್ಧರಾದ ಮಡಿಯಾಲ ಶ್ರೀ ನಾರಾಯಣ ಭಟ್ಟರ ಜನ್ಮಸ್ಥಳವನ್ನು ಒಂದು ಸ್ಮಾರಕವಾಗಿ, ಅವರು ಬಳಸಿದ ವಸ್ತುಗಳನ್ನು ಒಂದು ವಸ್ತು ಪ್ರದರ್ಶನಾಲಯವಾಗಿ ರೂಪಿಸಿ ದಿನಾಂಕ ೩೦-೧೧-೨೦೧೫ರಂದು ಅವರ ೮೯ನೇ ಜನ್ಮದಿನದಂದು ಲೋಕಾರ್ಪಣೆ ಮಾಡಲಾಯಿತು.
ನಾರಾಯಣ ಭಟ್ಟರ ಕನಸಿನಂತೆ, ಅಳಿಕೆಯಲ್ಲಿ ಬಾಲಕಿಯರಿಗಾಗಿ ಒಂದು ಸನಿವಾಸ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸುವ ಸಂಕಲ್ಪ ಮಾಡಲಾಯಿತು. ಅದರ ನೂತನ ಕಟ್ಟಡ ಶ್ರೀ ಸತ್ಯಸಾಯಿ ಪ್ರಶಾಂತಿನಿಕೇತನಮ್‌ಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಇದು ಸುಮಾರು ೧೦ ಕೋಟಿ ರೂಪಾಯಿಗಳ ಯೋಜನೆ.
ಶ್ರೀ ಸತ್ಯಸಾಯಿ ಸಮಾಗಮಮ್ ಆಡಿಟೋರಿಯಂಗೆ ಭೂಮಿ ಪೂಜೆ ನೆರವೇರಿಸಲಾಯಿತು. ಭಗವಾನ್ ಬಾಬಾರವರ ಹುಟ್ಟುಹಬ್ಬದ ಪ್ರಯುಕ್ತ ಮಡಿಯಾಲ ನಾರಾಯಣ ಭಟ್ಟರ ಹುಟ್ಟುಹಬ್ಬದಂದು ಬಂದವರಿಗೆಲ್ಲಾ ಬಟ್ಟೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಧುಸೂದನ ನಾಯ್ಡು, ಡಾ. ರವಿ ಪಿಳ್ಳೆ, ಸಂಸ್ಥೆಯ ಟ್ರಸ್ಟಿ ಬಿ.ಎನ್. ನರಸಿಂಹಮೂರ್ತಿ, ಅಮೇರಿಕಾದ ವೈದ್ಯರಾದ ಡಾ. ರಾಮ್ ಶೆಟ್ಟಿ, ಮಲೇಷಿಯಾದ ಉದ್ಯಮಿ ಮಿಂಗ್, ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿ ಯಂ. ಈಶ್ವರ ಭಟ್, ರೆಕ್ಟರ್ ಕೃಷ್ಣ ಭಟ್ ಉಪಸ್ಥಿತರಿದ್ದರು.