ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಳಿಕೆಗೆ ಉತ್ತಮ ಫಲಿತಾಂಶ
ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದು ಆಂಗ್ಲ ಮಾಧ್ಯಮದಲ್ಲಿ ಶೇ.1೦೦% ಪಲಿತಾಂಶ ದಾಖಲಿಸಿರುತ್ತದೆ. ಹಾಜರಾದ ಒಟ್ಟು 5೦ ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆ ಮತ್ತು 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಕನ್ನಡ ಮಾಧ್ಯಮದಲ್ಲಿ ಹಾಜರಾದ ಒಟ್ಟು 97 ವಿದ್ಯಾರ್ಥಿಗಳಲ್ಲಿ 95 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 98.6% ಫಲಿತಾಂಶ ದಾಖಲಿಸಿರುತ್ತಾರೆ. 95 ವಿದ್ಯಾರ್ಥಿಗಳಲ್ಲಿ 18 ವಿಶಿಷ್ಟ ದರ್ಜೆ, 65 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಮತ್ತು 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಆಂಗ್ಲ ಮಾಧ್ಯಮದ ಜೆ. ಆತ್ರೇಯ ನಾರಾಯಣ 615 ಅಂಕ, ಬಸವೇಶ್ವರ ಹೆಚ್. 6೦8 ಅಂಕಗಳನ್ನು ಪಡೆದು ಶಾಲೆಗೆ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕನ್ನಡ ಮಾಧ್ಯಮದಲ್ಲಿ ಸಚಿನ್ ಬಿ. ಎಸ್. 6೦7 ಅಂಕ, ವಿನಾಯಕ್ ಚನ್ನಾಲ್ 6೦5 ಅಂಕಗಳನ್ನು ಪಡೆದು ಶಾಲೆಗೆ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಗಣಿತದಲ್ಲಿ ಮಧು ಸಿ. ಬಿರಾದರ್ 1೦೦ ಅಂಕ ಮತ್ತು ಸಚಿನ್ ಬಿ. ಎಸ್. ಸಮಾಜ ವಿಜ್ಞಾನದಲ್ಲಿ 1೦೦ ಅಂಕಗಳಿಸಿರುತ್ತಾರೆ