SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

10ನೇ ತರಗತಿ ಸಿ.ಬಿ.ಎಸ್.ಇ. ಪರೀಕ್ಷೆಯಲ್ಲಿ ಸತತ 34ನೇ ಬಾರಿಗೆ 100% ಫಲಿತಾಂಶ

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ ಇಲ್ಲಿನ ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಕೇಂದ್ರೀಯ ಶಿಕ್ಷಣ ಮಂಡಳಿ, ದೆಹಲಿ (ಸಿ.ಬಿ.ಎಸ್.ಇ.) ಮಾರ್ಚ್ 2019ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಎಲ್ಲರೂ ಉತ್ತೀರ್ಣರಾಗುವುದರೊಂದಿಗೆ ಸತತವಾಗಿ ಶಾಲೆ ಪ್ರಾರಂಭವಾದಂದಿನಿಂದ 34ನೇ ಬಾರಿಗೆ 100% ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 84 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ವಿಶೇಷ ದರ್ಜೆಯೊಂದಿಗೆ ತೇರ್ಗಡೆ ಹೊಂದಿ, 20 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಪ್ರಥಮ ಕಾಮತ್ ಇವರು 98% ಅಂಕ ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾರೆ. 47 ವಿದ್ಯಾರ್ಥಿಗಳು 90%ಕ್ಕಿಂತ ಅಧಿಕ ಅಂಕ ಪಡೆದು ವಿದ್ಯಾಸಂಸ್ಥೆಗೆ ಹೆಸರು ತಂದಿರುತ್ತಾರೆ ಎಂದು ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಯಂ. ಶಿವಕುಮಾರ್ ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್., ಸಂಚಾಲಕರಾದ ಕೆ.ಯಸ್. ಕೃಷ್ಣ ಭಟ್ ಉಪಸ್ಥಿತರಿದ್ದರು.