“ಉತ್ತಮ ನಾಯಕತ್ವ ರಾಷ್ಟ್ರ ನಿರ್ಮಾಣಕ್ಕೆ ಮಾರ್ಗಸೂಚಿ”- ಡಾ| ಸುರೇಶ್ ಕೆ.ಸಿ.
ಸಮಯ : ಅಪರಾಹ್ನ 2:30ರಿಂದ
ಭಾರತವನ್ನು ಕಟ್ಟುವ ಧೀ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ. ದೇಶಕ್ಕೆ ಸಮರ್ಥ ನಾಯಕತ್ವ ಕೊಡಬಲ್ಲ ಹಾಗೂ ಸಮರ್ಥ ರಾಷ್ಟ್ರ ನಿರ್ಮಾಣದ ಕಲ್ಲುಗಳನ್ನು ಶಿಲೆಯನ್ನಾಗಿ ಪರಿವರ್ತಿಸುವ ಕೆಲಸ ಅಳಿಕೆಯಂತಹ ವಿದ್ಯಾಸಂಸ್ಥೆಗಳಿಂದ ಆಗುತ್ತಿದೆ. ಸರಳ ಜೀವನ, ಸರಿಯಾದ ನಿರ್ಧಾರ, ಛಲವಂತಿಕೆ, ಚಾಣಾಕ್ಷತೆ, ಇತರರನ್ನು ಗೌರವಿಸುವ ಗುಣ ಬೆಳೆಸಿಕೊಂಡಾಗ ನಾಯಕತ್ವ ಗುಣ ಪ್ರಾಪ್ತವಾಗಿ ರಾಷ್ಟ್ರ ಸಮರ್ಥವಾಗಿ ಬೆಳೆಯುವುದು ಎಂದು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಶ್ರೀ ವಿದ್ಯಾಗಣಪತಿ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ತುಮಕೂರು ವಿಶ್ವವಿದ್ಯಾನಿಲಯದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ| ಸುರೇಶ್ ಕೆ.ಸಿ. ಹೇಳಿದರು. ಸರ್ವ ಕರ್ಮಗಳ ನಿರ್ವಿಘ್ನತೆಗೆ ಗಣೇಶನ ಪೂಜೆ ಅವಶ್ಯ. ಮದದಿಂದ ಪೂಜಿಸದೆ ಭಕ್ತಿ ಏಕಾಗ್ರತೆಯಿಂದ ಪೂಜಿಸಿದಾಗ ಫಲಪ್ರದವಾಗುವುದು ಎಂದು ಭಾಸ್ಕರ ಭಟ್ ಪಂಜ ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್., ಸಂಚಾಲಕರಾದ ಕೆ.ಯಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ರಾಮಚಂದ್ರ ರಾವ್ ಡಿ. ಸ್ವಾಗತಿಸಿ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶಿವಕುಮಾರ್ ಯಂ. ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕರಾದ ಉದಯ ನಾಯ್ಕ ನಿರೂಪಿಸಿದರು. ವಿದ್ಯಾರ್ಥಿಗಳಾದ ಶಶಾಂಕ್ ಯನ್., ವಿವೇಕ್ ಕೆ.ಯಂ., ಸೂರ್ಯ ಯಸ್. ಭಾಷಣ ಮಾಡಿದರು. ವಲ್ಲೇಶ್ ಯಂ. ಮತ್ತು ಸೌರಭ್ರಾಜ್ ಹಾಡಿದರು.