ವಿದ್ಯಾಗಣಪತಿ ಮಹೋತ್ಸವ
ದಿನಾಂಕ : 02-09-2019 ಸೋಮವಾರ
ಸಮಯ : ಅಪರಾಹ್ನ 3:00ರಿಂದ
ಸಭಾ ಕಾರ್ಯಕ್ರಮ
ತಾಯಿ ಮಡಿಲಿನಿಂದ ಸಾಯಿ ಮಡಿಲಿಗೆ
“ಅಳಿಕೆ ವಿದ್ಯಾರ್ಥಿ ಜೀವನವೆಂದರೆ ತಾಯಿ ಮಡಿಲಿನಿಂದ ಸಾಯಿ ಮಡಿಲಿಗೆ ಸಂದಂತೆ”. ಅಳಿಕೆಯ ಹಿರಿಯ ವಿದ್ಯಾರ್ಥಿ ಪ್ರಸ್ತುತ ತೆಲಂಗಾಣದ ಖಮ್ಮಮ್ ಜಿಲ್ಲೆಯ ಅಸಿಸ್ಟೆಂಟ್ ಕಮಿಷನರ್ ಆಫ್ ಪೆÇಲೀಸ್ ಡಾ| ವಿನೀತ್ ಜಿ., ಐಪಿಎಸ್ ಇವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಜೀವನದಲ್ಲಿ ಒಂದು ಗುರಿ ಬೇಕು. ಅದನ್ನು ತಲುಪಲು ಮಾರ್ಗದರ್ಶಕರಾಗಿ ಗುರು ಬೇಕು. ಆಧ್ಯಾತ್ಮಿಕ ಗುರಿ ಮತ್ತು ಲೌಕಿಕ ಗುರಿಗಳೆರಡೂ ಬಾಳಿಗೆ ಮುಖ್ಯ ಎಂದು ಹೇಳಿದರು. ಅವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿದ್ಯಾಗಣಪತಿ ಮಹೋತ್ಸವದಲ್ಲಿ ಮೊದಲನೆಯ ದಿನ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ತಂದೆ ತಾಯಿಯರನ್ನು ದೇವರೆಂದು ಗೌರವಿಸುವ ಸಂಸ್ಕೃತಿ ನಮ್ಮದು. ಬರುವಾಗ ತರಲಿಲ್ಲ ಹೋಗುವಾಗ ಒಯ್ಯುವುದಿಲ್ಲ. ಅಂತಹ ಸಂಪತ್ತಿಗೆ ಆಸೆ ಪಡಬೇಡಿ. ಆದರ್ಶಕ್ಕಾಗಿ ಬದುಕುವ ತ್ಯಾಗ ಜೀವಿಗಳ ಕಮಿಟ್‍ಮೆಂಟ್ ಟೊ ಮಿಶನ್ ನಮಗೆ ಮಾದಗಿಯಾಗಲಿ. ಆಧ್ಯಾತ್ಮಿಕ ಶಿಕ್ಷಣ ಮತ್ತು ಲೌಕಿಕ ಶಿಕ್ಷಣ ಹಕ್ಕಿಯ ಎರಡು ರೆಕ್ಕೆಗಳಂತೆ ಒಂದನ್ನುಳಿದು ಇನ್ನೊಂದಕ್ಕೆ ಬೆಲೆ ಇಲ್ಲ ಎಂದು ಪ್ರಶಾಂತಿ ನಿಲಯಂ ವಿಶ್ವವಿದ್ಯಾನಿಲಯದ ಪೆÇ್ರಫೆಸರ್ ಆರ್. ಗಂಗಾಧರ ಶಾಸ್ತ್ರಿಯವರು ಮುಖ್ಯ ಅತಿಥಿಯಾಗಿ ನುಡಿದರು.
ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಶೇಖರ ಭಟ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮನೋಜ್, ಧನುಷ್, ಅಮರೇಶ್ ಮಾತನಾಡಿದರು. ವಿದ್ಯಾಕೇಂದ್ರದ ಉಪ ಪ್ರಾಂಶುಪಾಲ ರಾಧಾಕೃಷ್ಣ ಹೊಳ್ಳ ವಂದಿಸಿದರು. ಅಧ್ಯಾಪಕ ಶ್ರೀಧರ್ ಬಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.