SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಹಬ್ಬಗಳ ಆಚರಣೆಯಿಂದ ಮೌಲ್ಯಗಳ ಅಭಿವೃದ್ಧಿ.. – ಶ್ರೀ ವಿದ್ಯಾಗಣಪತಿ ಮಹೋತ್ಸವ

ಓಂ ಶ್ರೀ ಸಾಯಿರಾಮ್
ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಗಳು, ಅಳಿಕೆ
ಶ್ರೀ ವಿದ್ಯಾಗಣಪತಿ ಮಹೋತ್ಸವ
ದಿನಾಂಕ : 31-08-2022 ಬುಧವಾರ
ಸಮಯ : ಅಪರಾಹ್ನ 3:00ರಿಂದ

ಹಬ್ಬಗಳ ಆಚರಣೆಯಿಂದ ಮೌಲ್ಯಗಳ ಅಭಿವೃದ್ಧಿ..
ರುದ್ರಮುನಿ
ಸೆನೆಟ್ ಸದಸ್ಯರು, ಐ.ಐ.ಐ.ಟಿ. ಕೋಟ
ಮತ್ತು ನವ್ಯೋದ್ಯಮ (ಸ್ಪಾರ್ಟ್‌-ಅಪ್‌) ಸಲಹೆಗಾರರು, ಬೆಂಗಳೂರು

ಶ್ರೀ ವಿದ್ಯಾಗಣಪತಿ ಮಹೋತ್ಸವ ಆಚರಣೆಯು ದಿನಾಂಕ 31.08.2022 ರಂದು ಬೆಳಿಗ್ಗೆ 6 ಗಂಟೆಗೆ ವೇದಮೂರ್ತಿ ಉದನೇಶ್ವರ ಭಟ್ ಮಂಜಲಗಿರಿ ಇವರ ನೇತತ್ವದಲ್ಲಿ ಗಣಪತಿ ಹವನ, ವಿಗ್ರಹ ಪ್ರತಿಷ್ಠೆ, ವೈದಿಕ ಕಾರ್ಯಕ್ರಮಗಳು, ವೇದ, ಭಜನೆ ಹಾಗೂ ಮಹಾ ಮಂಗಳಾರತಿ ಭಕ್ತಿ ಸಂಭ್ರಮ ಸಡಗರದೊಂದಿಗೆ ನಡೆಯಿತು.
ಅಪರಾಹ್ನ ವಿದ್ಯಾಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್ ಕೃಷ್ಣ ಭಟ್ ರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೌರವ್ ಶೆಟ್ಟಿ, ತಂತ್ರಾಂಶ ವ್ಯವಸ್ಥಾಪಕರು ಫಾರ್ ಐ ಬೆಂಗಳೂರು ಇವರು ಗಣಪತಿ ಹಬ್ಬದ ಆಚರಣೆಯ ಮಹತ್ವವನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಹೆಚ್ಚು ಕೇಳುವವರಾಗಿ, ಕಡಿಮೆ ಮಾತಾಡುವವರಾಗಿ ಸಿದ್ಧಿವಿನಾಯಕನ ಕೃಪೆಗೆ ಪಾತ್ರರಾಗಬೇಕೆಂದರು.
ಇನ್ನೋರ್ವ ಮುಖ್ಯ ಅತಿಥಿ ರುದ್ರಮುನಿ ಸೆನೆಟ್ ಸದಸ್ಯರು ಐ. ಐ. ಐ ಟಿ ಕೋಟಾ ಮತ್ತು ನವ್ಯೋದ್ಯಮ ಸಾಫ್ಟ್ ವೇರ್ ಸಲಹೆಗಾರರು ಬೆಂಗಳೂರು ಇವರು ಮಾತನಾಡುತ್ತಾ ಅಳಿಕೆಯಲ್ಲಿ ಶಿಕ್ಷಣದೊಂದಿಗೆ ಸಿಗುವ ಜೀವನ ಮೌಲ್ಯಗಳು ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಬಹು ಅಗತ್ಯ. ಆದುದರಿಂದ ವಿದ್ಯಾರ್ಥಿಗಳೆಲ್ಲರೂ ಮಾನವೀಯ ಮೌಲ್ಯ ಶಿಕ್ಷಣದ ಮಹತ್ವವನ್ನು ಅರಿತುಕೊಂಡು ಇಷ್ಟಪಟ್ಟು ಎಲ್ಲಾ ಚಟುವಟಿಕೆಗಳಲ್ಲಿ ಶ್ರದ್ದೆಯಿಂದ ಭಾಗವಹಿಸಬೇಕು ಕರೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಕೆ.ಎಸ್. ಕೃಷ್ಣ ಭಟ್ ರವರು ಗಣಪತಿ ಹಬ್ಬದ ಆಚರಣೆಯು ದೇಶದ ಜನರ ಐಕ್ಯತೆಯ ಸಂಕೇತ. ಸ್ವಾತಂತ್ರ್ಯ ಪೂರ್ವದಲ್ಲಿ ತಿಲಕರು ಈ ಆಚಣೆಯ ಮೂಲಕ ಸಮಗ್ರ ಏಕತೆಯನ್ನು ಸಾಧಿಸಿದರು. ಇಂದು ಯುವಜನರು ದೇಶದ ಅಭವೃದ್ಧಿಗೆ ಹಬ್ಬಗಳ ಆಚರಣೆ ಮೂಲಕ ಒಂದಾಗಿ ಶ್ರಮಿಸಬೇಕು ಎಂದು ಆಶಿಸಿದರು.
ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಸಂಚಾಲಕ ಚಂದ್ರಶೇಖರ ಭಟ್ ಎಸ್, ಸಂಸ್ಥೆಯ ಆಡಳಿತಾಧಿಕಾರಿ ಎಸ್. ಜನಾರ್ದನ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಲ್ಲಾ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳ ಹೆತ್ತವರು ಪೋಷಕರು, ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾಕೇಂದ್ರದ ಉಪ ಪ್ರಾಂಶುಪಾಲ ರಾಧಾಕೃಷ್ಣ ಹೊಳ್ಳ ಸ್ವಾಗತಿಸಿ ಪಿ.ಯು. ಕಾಲೇಜ್ ಉಪನ್ಯಾಸಕ ಮೇರುತುಂಗ ಎಸ್.ವಿ ವಂದಿಸಿದರು. ವಿದ್ಯಾಕೇಂದ್ರದ ಅಧ್ಯಾಪಕ ಶ್ರೀಧರ್ ಬಿ. ಕಾರ್ಯಕ್ರಮ ನಿರ್ವಹಿಸಿದರು. ಸಂಜೆ ಭಜನಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.