SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ವಿಶ್ವ ಯೋಗ ದಿನಾಚರಣೆ

ಯೋಗದ ಪ್ರಾಮುಖ್ಯತೆಯ ಮೂಲಕ ಜಾಗತಿಕ ಶಾಂತಿ ಸ್ಥಾಪನೆ : ರತ್ನಾಕರ ರೈ
ಜೂನ್-21 , ಅಳಿಕೆ
ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಇಂದು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ – ಇಲ್ಲಿ ಆಚರಿಸಲಾಯಿತು. ಇದರ ಸಲುವಾಗಿ ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಶ್ರೀ ರಘು – ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿನಾಚರಣೆಯ ಸಲುವಾಗಿ ಆರೋಗ್ಯದ ಸುಸ್ಥಿತಿಗೆ ಯೋಗವೇ ಮುಖ್ಯ ಎಂದು ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಹಾಗೇಯೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಸಂಸ್ಥೆಯ ಗೌರವ ಶಿಕ್ಷಕರಾದ ಶ್ರೀ ರತ್ನಾಕರ ರೈರವರು ವಿಶ್ವಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಉಳಿಸಿ ಬೆಳೆಸಬೇಕು ಮತ್ತು ಯೋಗದ ಪ್ರಾಮುಖ್ಯತೆಯ ಮೂಲಕ ಜಾಗತಿಕ ಶಾಂತಿ ಸ್ಥಾಪನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸರಳ, ಸಜ್ಜನಿಕೆಯ, ನಿಸ್ವಾರ್ಥ ಸೇವೆಯ ವ್ಯಕ್ತಿಯಾಗಿರುವ ಸಂಸ್ಥೆಯ ಯೋಗ ಗುರುಗಳಾದ ಶ್ರೀ ಆನಂದ ಶೆಟ್ಟಿಯವರು ಮಕ್ಕಳಿಗೆ ಯೋಗ ತರಬೇತಿಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಇವರನ್ನು ಸನ್ಮಾನಿಸಲಾಯಿತು ಮತ್ತು ವಿದ್ಯಾರ್ಥಿಗಳಿಂದ ಪ್ರತಿಜ್ಙಾ ವಿಧಿಯನ್ನು ಬೋಧಿಸಲಾಯಿತು.ಇದೇ ಸಂದರ್ಭದಲ್ಲಿ ಬಾಲಕುಟೀರದ ವಸತಿ ನಿಲಯದ ನಿಲಯ ಪಾಲಕರಾದ ಶ್ರೀ ಉದನೇಶ್ವರ ಭಟ್, ಅಳೀಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ಶ್ರೀ ಕಾನ ಈಶ್ವರ ಭಟ್, ಸಂಸ್ಥೆಯ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥತಿರಿದ್ದರು. ಕಾರ್ಯಕ್ರಮವನ್ನು ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ರೂಪಿತ್ ರೈ ಅವರು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಲಕ್ಷ್ಮೀ ಯವರು ವಂದನಾರ್ಪಣೆ ಗೈದರು ಹಾಗೆಯೇ ಶಿಕ್ಷಕರಾದ ಶ್ರೀ ನಾರಾಯಣ ನಾಯಕ್ ರವರು ನಿರೂಪಿಸಿದರು.