ಸ್ವಾತಂತ್ರ್ಯದ ಆಸೆ ಹುಟ್ಟಿಸಿದ ಸ್ವಾಮಿ ವಿವೇಕಾನಂದರು – ತೋಳ್ಪಾಡಿ
ಅಳಿಕೆ: 12-01-17:
ಬ್ರಿಟಿಷರ ದಾಸ್ಯದಿಂದ ಬಳಲಿ ಗುಲಾಮರಾಗಿ ಬದುಕುವುದಕ್ಕೇ ಒಗ್ಗಿಹೋಗಿದ್ದ ಭಾರತೀಯರಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯದ ಕಿಚ್ಚು ಹಚ್ಚಿದವರು ಸ್ವಾಮಿ ವಿವೇಕಾನಂದರು; ಅಂತಹ ಧೀಮಂತ ವ್ಯಕ್ತಿತ್ವ ಅವರದು ಎಂಬುದಾಗಿ ಶ್ರೀಯುತ ಪರೀಕ್ಷೀತ್ ತೋಳ್ಪಾಡಿಯವರು ಹೇಳಿದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪಿ ಯು ಕಾಲೇಜಿನಲ್ಲಿ ಜರಗಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಾಲೇಜಿನ ಎನ್ಎಸ್ಎಸ್ ವತಿಯಿಂದ ಸಂಘಟಿಸಲ್ಪಟ್ಟ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಛೇರ್ಮನ್ ಗಂಗಾಧರ ಭಟ್ರವರು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ ಭಟ್, ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್, ಹಿರಿಯರಾದ ಸಂಜೀವ ಶೆಟ್ಟಿ, ರಮಾನಂದ ಎಚ್, ಕಾಲೇಜು ಪ್ರಾಂಶುಪಾಲರಾದ ಪ್ರಕಾಶ್ ವಿ. ದೈವಜ್ಞ ಮತ್ತು ವಿದ್ಯಾಕೇಂದ್ರದ ಪ್ರಾಂಶುಪಾಲ ಶಿವಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ವೆಂಕಟಕೃಷ್ಣ ಶರ್ಮಾ ಸ್ವಾಗತ ಮತ್ತು ನಿರೂಪಣೆ ಮಾಡಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಡಿ ರಾಮಚಂದ್ರ ರಾವ್ ಧನ್ಯವಾದವನ್ನಿತ್ತರು.