SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ವಿಶ್ವ ಯೋಗ ದಿನಾಚರಣೆ

ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಪ್ರತಿ ದಿನ ಯೋಗಾಭ್ಯಾಸ ಮಾಡುತ್ತಿದ್ದು, ಅಂತರಾಷ್ಟ್ರೀಯ ಯೋಗ ದಿನದಂದು ಬಹಳ ಉತ್ಸುಕತೆ ಹಾಗೂ ಸಂಭ್ರಮದಿಂದ ವಿಶೇಷ ಯೋಗ ಪ್ರದರ್ಶನ ನೀಡಿ ಗಮನ ಸೆಳೆದರು.

 

ಮೊದಲಿಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್., ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ದಿನನಿತ್ಯ ಯೋಗ ಮಾಡುವುದರ ಉಪಯೋಗದ ಬಗ್ಗೆ ಚುಟುಕಾಗಿ ವಿವರಿಸಿದರು. ಉಪಪ್ರಾಂಶುಪಾಲ ರಾಧಾಕೃಷ್ಣ ಹೊಳ್ಳ ಮಾತನಾಡಿ ಯೋಗದ ಮುಖಾಂತರ ಇಡೀ ಜಗತ್ತೇ ಭಾರತದತ್ತ ಮುಖ ಮಾಡುವಂತಾಗಿದೆ. ಅದನ್ನು ಇನ್ನೂ ಎತ್ತರಕ್ಕೆ ಏರಿಸಿ, ಭಾರತವನ್ನು ಎಲ್ಲಾ ರಂಗಗಳಲ್ಲಿಯೂ ವಿಶ್ವ ಗುರುವಾಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ನಂತರ ಯೋಗ ಗುರುಗಳಾದ ಆನಂದ ಶೆಟ್ಟಿಯವರು ಯೋಗ ನಿರ್ದೇಶನ ಮಾಡಿದರು. ಪ್ರಾಂಶುಪಾಲ ಶಿವಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಜಗದೀಶ್ ವಂದಿಸಿದರು. ನಿಲಯ ಪಾಲಕರು, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.