ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 91ನೇ ಜನ್ಮ ದಿನಾಚರಣೆ

ದಿನಾಂಕ : 23-11-2016 ಬುಧವಾರ ದೇವರನ್ನು ನಾವು ಕಂಡಿಲ್ಲ. ಬಾಬಾರವರ ಮೂಲಕ ದೇವತ್ವವನ್ನೇ ಕಂಡುಕೊಂಡಿದ್ದೇವೆ. ಇಂದು ಸ್ವಾಮಿ ನಮ್ಮೊಂದಿಗಿಲ್ಲ, ನಮ್ಮಲ್ಲಿಯೇ ಇದ್ದಾರೆ. ಸಮಾಜ ಸೇವೆಯ ಮೂಲಕ ಇಡೀ ಲೋಕಕ್ಕೆ ಮಾದರಿಯಾಗಿದ್ದಾರೆ. ಅವರು ಆಯ್ಕೆ ಮಾಡಿಕೊಂಡ ಮೊದಲ ಕ್ಷೇತ್ರ ಶಿಕ್ಷಣ. ಎರಡನೇ ಕ್ಷೇತ್ರ ಆರೋಗ್ಯ. ಇದೇ ತಾನೇ ಆಗಬೇಕಾಗಿರುವುದು? ಇಂದಿನ ಶಿಕ್ಷಣ ಕಡಿಮೆ ಶ್ರಮ, ಅಧಿಕ ಸಂಪಾದನೆ ಭಾವನೆಗಳನ್ನು ಬೆಳೆಸುತ್ತಿದೆ. ತಾನೊಬ್ಬ ಉದ್ದಾರವಾದರೆ ಸಾಕು ಎಂಬ ಸ್ವಾರ್ಥ ಭಾವನೆ ಬೆಳೆಸಿಕೊಂಡಿದ್ದಾರೆ. ಇದು ಬದಲಾಗಬೇಕು. ದೇಶ ಪ್ರೇಮ ಬೆಳೆಸಿಕೊಳ್ಳಿ. ದೇಶಕ್ಕಾಗಿ […]

ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ 2016-17

ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ 2016-17

ದಿ.೧೧-೧೧-೨೦೧೬ರಂದು ಅಳಿಕೆ ಶ್ರೀ ಸತ್ಯಸಾಯಿ ಕ್ರೀಡಾಂಗಣದಲ್ಲಿ ಜರಗಿದ ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗುರುನಾಥ ಬಿ. ಬಾಗೇವಾಡಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಬಂಟ್ವಾಳ ತಾಲೂಕು ಇವರು ವಹಿಸಿ ಬಹುಮಾನವನ್ನು ವಿತರಿಸಿದರು. ವೇದಿಕೆಯಲ್ಲಿ ಚಂದ್ರಶೇಖರ ಭಟ್ ಎಸ್. ಕಾರ್ಯದರ್ಶಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ, ರಘು ಟಿ.ವೈ., ಪ್ರೌಢಶಾಲಾ, ಮುಖ್ಯೋಪಾಧ್ಯಾಯರು, ಈಶ್ವರ ನಾಯ್ಕ್, ಮುಖ್ಯೋಪಾಧ್ಯಾಯರು, ಪ್ರಾಥಮಿಕ ಶಾಲೆ, ಅಳಿಕೆ, ಪೂವಪ್ಪ ಶೆಟ್ಟಿ, ಅಳಿಕೆ ಉಪಸ್ಥಿತರಿದ್ದರು. ಅಶೋಕ ಭಟ್ […]