ಅಳಿಕೆಯಲ್ಲಿ ಗಣೇಶ ವಿಸರ್ಜನೆ

ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ೨೯-೦೮-೨೦೧೪ರಂದು ಪ್ರತಿಷ್ಠಾಪನೆಯಾದ ಚೌತಿ ಗಣೇಶನ ವಿಸರ್ಜನಾ ಮೆರವಣಿಗೆ ೩೧-೦೮-೨೦೧೪ರಂದು ವಿನೂತನ ಮಾದರಿಯಲ್ಲಿ ನಡೆಯಿತು. ಸುಡುಮದ್ದುಗಳ ಆಟಾಟೋಪಗಳ ಬದಲು ಸಂಸ್ಥೆಯ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ವಿವಿಧ ರೀತಿಯ ಔಷಧೀಯ ಸಸ್ಯಗಳನ್ನು ನೆಟ್ಟು ಸಮಾಜಕ್ಕೆ ಅರ್ಪಿಸಿದರು. ಪಟಾಕಿ ಒಡೆಯುವುದರಿಂದ ಪ್ರಕೃತಿ-ಪರಿಸರ ಮಾಲಿನ್ಯವಾಗುವುದನ್ನು ತಡೆದು, ಪರಿಸರ ಶುದ್ಧಿಗಾಗಿ ಗಿಡನೆಟ್ಟು ಬೆಳೆಸುವ ಇಲ್ಲಿನ ವಿದ್ಯಾರ್ಥಿಗಳ ಉನ್ನತ ಮನೋಭಾವ ಎಲ್ಲೆಡೆಗಳಿಂದ ಶ್ಲಾಘನೆಗೆ ಪಾತ್ರವಾಯಿತು. ಇಲ್ಲಿನ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿಗಳಾದ ಯಂ. ಈಶ್ವರ ಭಟ್, […]

ಗಣೇಶೋತ್ಸವದ ಕಾರ್ಯಕ್ರಮ

ಸ್ವತಂತ್ರ್ಯ ಪೂರ್ವದಲ್ಲಿ ಸಹಬಾಳ್ವೆ, ಸಮಬಾಳ್ವೆ, ಸಾಮರಸ್ಯದ ಪ್ರತೀಕವಾಗಿ ಆಚರಿಸಲ್ಪಡುತ್ತಿದ್ದ ಗಣೇಶ ಹಬ್ಬವು ಇಂದು ಎಲ್ಲ ವರ್ಗದ ಜನರ ಭಾವನೆಗಳಿಗೆ ಸುಲಭವಾಗಿ ಸ್ಪಂದಿಸುತ್ತಿದ್ದ ಭಗವಂತನ ಆರಾಧನೆಯ ಪ್ರತೀಕವಾಗಿ ಮಾರ್ಪಾಡಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಹೇಳಿದರು. ಎಲ್ಲಾ ಧರ್ಮಗಳ ಪರಮ ಉದ್ದೇಶ ಜ್ಞಾನ ಜ್ಯೋತಿಯನ್ನು ಪಡೆಯುವುದೇ ಆಗಿದೆ. ತಿಲಕರಿಂದ ಪ್ರಾರಂಭವಾದ ಗಣೇಶೋತ್ಸವವು ಇಂದು ಮನೆ ಮನೆಗಳಲ್ಲಿ, ಮನ ಮನಗಳಲ್ಲಿ, ರಾಜ್ಯ ರಾಜ್ಯಗಳಲ್ಲಿ ಜನರನ್ನು ಒಂದುಗೂಡಿಸುತ್ತಿದೆ ಎಂದು ವೇದಮೂರ್ತಿ […]

ದೇಶ ಭಕ್ತಿ ಮತ್ತು ದೈವ ಭಕ್ತಿ ಬೆಳೆಸಿಕೊಳ್ಳಿ-ಪ್ರೊ. ಬಿ.ಎಸ್. ನಂಜುಂಡ ದೀಕ್ಷಿತ್

ದೈವ ಭಕ್ತಿ ಮತ್ತು ದೇಶ ಭಕ್ತಿ ಬೆಳೆಸಿಕೊಂಡಾಗ ಬದುಕಿಗೊಂದು ಅರ್ಥ ಬರುತ್ತದೆ. ಗಣೇಶನ ಆರಾಧನೆಯಿಂದ ವಿದ್ಯೆ, ಬುದ್ಧಿ ಸಿದ್ಧಿಸುತ್ತದೆ. ಗಳಿಸಿದ ಸಿದ್ಧಿಯನ್ನು ದೇಶದ ಒಳಿತಿಗಾಗಿ ಬಳಸಿಕೊಳ್ಳಬೇಕು. ವಿದೇಶದಲ್ಲಿ ಹೋಗಿ ನೆಲಸಿ ಸಂಪತ್ತನ್ನು ಗಳಿಸಿ, ತಪ್ಪಲ್ಲ. ಆದರೆ ಆ ಸಂಪತ್ತು ನಮ್ಮ ಸಮಾಜಕ್ಕೆ ವಿನಿಯೋಗಬೇಕು ಎಂದು ಆಗಮಶಾಸ್ತ ಪಂಡಿತರಾದ ಪ್ರೊ. ಬಿ.ಎಸ್. ನಂಜುಂಡ ದೀಕ್ಷಿತರು ವಿದ್ಯಾರ್ಥಿಗಳಿಗೆ ಹೇಳಿದರು. ಅವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳು ಏರ್ಪಡಿಸಿರುವ ವಿದ್ಯಾಗಣಪತಿ ಉತ್ಸವದ ಎರಡನೇ ದಿನದ ಪೂರ್ವಾಹ್ನ ನಡೆದ ಸಭಾ ಕಾರ್ಯಕ್ರಮದ […]

ಸಮಾಜಮುಖಿ ಚಿಂತನೆಯೇ ಗಣೇಶೋತ್ಸವದ ಗುರಿ – ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಶಿಕ್ಷಣದ ಮೂಲಕ ಅಂತರಂಗದ ಸೌಂದರ್ಯ ವೃದ್ಧಿಸಬೇಕು. ಪರಿಸರ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ಜಾಗೃತವಾಗಿ ಸಮಾಜಮುಖಿ ಚಿಂತನೆ ಮಾಡುವಂತಾದಾಗ ಅಂತರಂಗದ ಸೌಂದರ್ಯ ಜಾಗೃತವಾದಂತೆ. ಅಹಂಕಾರ ಮತ್ತು ಮಮಕಾರ ಎರಡರಿಂದ ಮುಕ್ತವಾಗಬೇಕು. ತಂದೆ ತಾಯಿಯರನ್ನು ನೋಯಿಸುವುದಿಲ್ಲ. ಕಲಿಸಿದ ಗುರುಗಳನ್ನು ನೋಯಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಿ ನಡೆಸುವುದು ಸಾಧ್ಯವಾದರೆ ಸೌಂದರ್ಯ ವಿಕಸಿಸಿದಂತೆ. ದೇಶಕ್ಕಾಗಿ ಯಾವ ಬಲಿದಾನಕ್ಕೂ ಸಿದ್ಧರಾಗಬೇಕು ಎಂದು ಕರ್ನಾಟಕ ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿದರು. ಅವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ […]

ಜೀವಶಾಸ್ತ್ರ ಪ್ರಯೋಗಾಲಯ ನವೀಕೃತ ಕೊಠಡಿ ಉದ್ಘಾಟನೆ

ದಿನಾಂಕ 26-06-2014 ಗುರುವಾರ ಅಳಿಕೆ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಯೋಗಾಲಯದ ನವೀಕೃತ ಕೊಠಡಿಯನ್ನು ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಉದ್ಘಾಟಿಸಿ, ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಈ ಪ್ರಯೋಗಾಲಯ ಪೂರಕವಾಗಲಿ ಎಂದು ಹಾರೈಸಿದರು. ಮುಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆ ದೃಷ್ಟಿಯಿಂದ ಹೆಚ್ಚುವರಿ ಅಧ್ಯಯನಕ್ಕೆ ಈ ಪ್ರಯೋಗಾಲಯ ಅನುಕೂಲಕರವಾಗಲಿ ಎಂದು ಸಂಸ್ಥೆಯ ಸಂಚಾಲಕರಾದ ಯಂ. ಈಶ್ವರ ಭಟ್ ತಿಳಿಸಿದರು. ರೆಕ್ಟರ್ ಕೃಷ್ಣ ಭಟ್, ಪ್ರಾಂಶುಪಾಲ ಪ್ರಕಾಶ್ ವಿ. ದೈವಜ್ಞ ಸ್ವಾಗತಿಸಿ ಜೀವಶಾಸ್ತ್ರ ಉಪನ್ಯಾಸಕರಾದ ಡಾ| ಸಿದ್ದರಾಜು […]