70 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾಕೇಂದ್ರದ ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಬಹಳ ಭಕ್ತಿ, ಗೌರವ, ಸಂಭ್ರಮ ಸಡಗರದೊಂದಿಗೆ 70 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು. ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯವರಾದ ಯಸ್. ಚಂದ್ರಶೇಖರ ಭಟ್‌ರವರು ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಭಜನಾ ಕಾರ್ಯಕ್ರಮ ನಡೆಯಿತು.ವಿದ್ಯಾಸಂಸ್ಥೆಗಳ ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್‌ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ವಲ್ಲೀಶ್, ಶ್ರೀಶ ಎಂ.ಎಸ್., ಸುವಿನಕುಮಾರ್ ಹಾಗೂ ರಾಮಪ್ರಕಾಶ ರೈ, ಭಾರತ ದೇಶಕ್ಕೆ ದಕ್ಕಿದ ಸ್ವಾತಂತ್ರ್ಯವನ್ನು ಯಾವ […]

ವನಮಹೋತ್ಸವ, ಜಲಮರುಪೂರಣ,ಆಟಿಡೊಂಜಿದಿನ & ಶಾಲಾ ವಾರ್ಷಿಕ ಶ್ರಮಸೇವೆ – ಸಂಯುಕ್ತ ಕಾರ್ಯಕ್ರಮ

ವನಮಹೋತ್ಸವ, ಜಲಮರುಪೂರಣ,ಆಟಿಡೊಂಜಿದಿನ & ಶಾಲಾ ವಾರ್ಷಿಕ ಶ್ರಮಸೇವೆ - ಸಂಯುಕ್ತ ಕಾರ್ಯಕ್ರಮ

ದಿನಾಂಕ ೦೫.೦೮.೨೦೧೬ನೇ ಶುಕ್ರವಾರ ವನಮಹೋತ್ಸವ, ಜಲಮರುಪೂರಣ, ಆಟಿಡೊಂಜಿದಿನ ಮತ್ತು ಶಾಲಾ ವಾರ್ಷಿಕ ಶ್ರಮಸೇವೆ – ಎನ್ನುವ ಸಂಯುಕ್ತ ಕಾರ್ಯಕ್ರಮವು ಶ್ರೀಮತಿ ಶುಕುಂತಲಾ ಶೆಟ್ಟಿ, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ ಮತ್ತು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಪ್ರಬಂಧಕರಾದ ಶ್ರೀ ಮಹೇಂದ್ರ ಎಸ್.ಹೆಗ್ಡೆ ಇವರು ದೀಪೋಜ್ವಲನ ಮಾಡುವ ಮೂಲಕ ಚಾಲನೆಗೊಂಡಿತು. ಅತಿಥಿಗಳಾಗಿ ಶ್ರೀ ಜಾನ್ ಡಿಸೋಜ-ವಿಟ್ಲ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪದ್ಮನಾಭ ಪೂಜಾರಿ ಇವರು ಸಕಾಲಿಕ ಮಾತುಗಳನ್ನಾಡಿದರು. ಮುಖ್ಯೋಪಾಧ್ಯಾಯರಾದ ಶ್ರೀ ರಘು ಸ್ವಾಗತಿಸಿ, ಶಿಕ್ಷಕ ವಿ.ನಾರಾಯಣ […]

ಶಾಲೆಗಳಲ್ಲಿ ಜಲಮರುಪೂರಣ ಅಗತ್ಯ : ಬಿ.ಇ.ಓ.

ಶಾಲೆಗಳಲ್ಲಿ ಜಲಮರುಪೂರಣ ಅಗತ್ಯ : ಬಿ.ಇ.ಓ.

ಭವಿಷ್ಯದ ನೀರಿಗಾಗಿ ಇಂದೇ ಜಲಮರುಪೂರಣ ಮಾಡುವುದು ಅಗತ್ಯ. ಶಾಲೆಗಳಲ್ಲಿ ಜಲಮರುಪೂರಣ ಮಾಡುವುದರ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಶೇಷಶಯನ ಕಾರಿಂಜ ಹೇಳಿದರು. ಅವರು ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ ಇಲ್ಲಿ ನಡೆದ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಯು.ಗಂಗಾಧರ ಭಟ್ ಇವರು ಮಕ್ಕಳು ಆಟ ಹಾಗೂ ಪಾಠದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ಸ್ವಸ್ಥ […]

ಪದವಿ ಪೂರ್ವ ವಿದ್ಯಾಲಯದಲ್ಲಿ ನೂತನ ಶೌಚಾಲಯದ ಉದ್ಘಾಟನಾ ಸಮಾರಂಭ

ಪದವಿ ಪೂರ್ವ ವಿದ್ಯಾಲಯದಲ್ಲಿ ನೂತನ ಶೌಚಾಲಯದ ಉದ್ಘಾಟನಾ ಸಮಾರಂಭ

ಕೇವಲ ಭೌತಿಕ ಶಿಕ್ಷಣಕ್ಕೆ ಒತ್ತು ನೀಡಿ, ಬದುಕಿಗೆ ನೇರವಾಗಿ ನೆರವಾಗುವ ಶಿಸ್ತು ಹಾಗೂ ದೈವಭಕ್ತಿಯನ್ನು ಕಡೆಗಣಿಸಿದುದರ ಪರಿಣಾಮವಾಗಿ ಸಮಾಜ ಅವನತಿಯ ಕಡೆಗೆ ಸಾಗುತ್ತಿದೆ. ಅಳಿಕೆಯ ವಿದ್ಯಾಸಂಸ್ಥೆಯಲ್ಲಿ ಆಧುನಿಕ ಹಾಗೂ ಪ್ರಾಚೀನ ಮೌಲ್ಯಗಳನ್ನು ಸಮನ್ವಯಗೊಳಿಸಿರುವುದನ್ನು ಮೆಚ್ಚಿ ಮಾತನಾಡಿದ ಬೋಬ್‌ರಾಜ್ ಜೆಹರಾನ್ ಜನರಲ್ ಮ್ಯಾನೇಜರ್, ಕೆಐಒಸಿಎಲ್, ಮಂಗಳೂರು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆಯ ವಿದ್ಯಾಸಂಸ್ಥೆಯ ಪದವಿ ಪೂರ್ವ ವಿದ್ಯಾಲಯದಲ್ಲಿ ನೂತನವಾಗಿ ರೂ.16 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯವನ್ನು ಉದ್ಘಾಟಿಸಿದರು. ಕೇಂದ್ರ ಸರಕಾರದ ಸ್ವಚ್ಛ ವಿದ್ಯಾಲಯ ಅಭಿಯಾನದ ಸಿಎಸ್‌ಆರ್ ಯೋಜನೆಯಂತೆ […]

ಅಳಿಕೆ ಸಿಬಿಎಸ್‌ಇ ಸತತ 31ನೇ ಬಾರಿಗೆ ಶೇ.100 ಫಲಿತಾಂಶ

ಕೇಂದ್ರೀಯ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ.) ದೆಹಲಿ ನಡೆಸಿದ 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ಮಾರ್ಚ್ 2016ರಲ್ಲಿ ಪರೀಕ್ಷೆ ಬರೆದಿರುವ 97 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ದಾಖಲೆ ಸೃಷ್ಠಿಸಿದ್ದಾರೆ. 97ರಲ್ಲಿ 45 ಮಂದಿ ವಿದ್ಯಾರ್ಥಿಗಳು ಎ1 ಗ್ರೇಡ್ (10ರಲ್ಲಿ 10 ಅಂಕಗಳು) ಪಡೆದದ್ದು ವಿಶೇಷ. ಒಟ್ಟಾರೆ 97ರಲ್ಲಿ 76 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆ ಹಾಗೂ ಉಳಿದ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.